ಬೆಳಗ್ಗಿನ ತಿಂಡಿಗೆ ಹಾಗೂ ಮಧ್ಯಾಹ್ನದ ಅನ್ನದ ಜೊತೆ ಸವಿಯಲು ಸೂಪರ್‌ ಕಡ್ಲೆಬೇಳೆ ಚಟ್ನಿ ರೆಸಿಪಿ

ಬೆಳಗ್ಗಿನ ಉಪಾಹಾರದ ದೋಸೆಗೆ, ಮಧ್ಯಾಹ್ನದ ಅನ್ನಹಾಗೂ ಗಂಜಿಗೆ ಈ ಕಡ್ಲೆಬೇಳೆ ಚಟ್ನಿ ಸೂಪರ್ ಕಾಂಬಿನೇಷನ್. ಈ ಚಟ್ನಿ ಕೊಬ್ಬರಿ ಚಟ್ನಿಯೇ ಆದರೂ ರುಚಿಯಲ್ಲಿ ತುಂಬಾನೇ ಭಿನ್ನವಾಗಿರುತ್ತದೆ, ಟೇಸ್ಟ್ ಸೂಪರ್ ಅನಿಸುವುದು, ಈ ಗಟ್ಟಿ ಚಟ್ನಿ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ:
ಚೆನ್ನಾ ದಾಲ್ 3 ಚಮಚ
ಉದ್ದಿನ ಬೇಳೆ 1ಚಮಚ
ಎಣ್ಣೆ 3 ಚಮಚ
ಒಣ ಮೆಣಸು
3 ತೆಂಗಿನ ತುರಿ
1ಕಪ್ ಸ್ವಲ್ಪ ಹುಣಸೆಹಣ್ಣು
ರುಚಿಗೆ ತಕ್ಕ ಉಪ್ಪು
ಸ್ವಲ್ಪ ನೀರು
ಸಾಸಿವೆ 1 ಚಮಚ
ಸ್ವಲ್ಪ ಇಂಗು

ತಯಾರಿಸುವುದು ಹೇಗೆ?
* ಪ್ಯಾನ್ ಬಿಸಿ ಮಾಡಿ ಎಣ್ಣೆ ಹಾಕಿ.
* ಅದಕ್ಕೆ ಚನ್ನಾ ದಾಲ್ ಹಾಕಿ 1 ಚಮಚ ಉದ್ದಿನ ಬೇಳೆ ಹಾಕಿ.
* ಅವುಗಳು ಕಂದು ಬಣ್ಣ ಬರುವವರೆಗೆ ಸ್ವಲ್ಪ ಕರಿಬೇವು ಹಾಕಿ.
*ನಂತರ ಉರಿಯಿಂದ ಇಳಿಸಿ ತಣ್ಣಗಾಗಲು ಬಿಡಿ.
* ನಂತರ ಬ್ಲೆಂಡರ್ಗೆ ತೆಂಗಿನ ತುರಿ, ಹುಣಸೆಹಣ್ಣು, ರೋಸ್ಟ್ ಮಾಡಿದ ಕರಿಬೇವು, ಬೇಳೆಗಳನ್ನು ಹಾಕಿ, ಖಾರ ಸೇರಿಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಸ್ವಲ್ಪ ನೀರು ಹಾಕಿ ಬ್ಲೆಂಡ್ ಮಾಡಿ.
* ತುಂಬಾ ನುಣ್ಣನೆ ರುಬ್ಬಬೇಡಿ, ಸ್ವಲ್ಪ - ಸ್ವಲ್ಪ ತರಿತರಿ ರುಬ್ಬಿ.
* ನಂತರ ಒಗ್ಗರಣೆ ಹಾಕಿ ಒಗ್ಗರಣೆಗೆ ಸ್ವಲ್ಪ ಇಂಗು ಹಾಕಿದರೆ ಇನ್ನೂ ಟೇಸ್ಟ್.

ಇತರ ಸಲಹೆ:
*ಬೇಳೆಗಳನ್ನು ರೋಸ್ಟ್ ಮಾಡುವಾಗ ಅದು ಸೀದು ಹೋಗಬಾರದು, ಕಡಿಮೆ ಉರಿಯಲ್ಲಿ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ.
* ಖಾರ ನಿಮ್ಮ ರುಚಿಗೆ ತಕ್ಕಷ್ಟು ಸೇರಿಸಿ.
* ನೀವು ಹಸಿ ಮೆಣಸು ಬಳಸುವ ಬದಲಿಗೆ ಒಣ ಮೆಣಸು ಹಾಕಿ.